ಗೋರಿಯ ಮೇಲೆ ಬರೆದಿತ್ತು
‘ನಿನ್ನೆ, ನಿನ್ನಂತೆ ನಾನು
ನಾಳೆ, ನನ್ನಂತೆ ನೀನು!’
ಹೊರತಲ್ಲ ನಾವೇನೂ
ಇಂದಲ್ಲ ನಾಳೆ
ಗೋರಿಯಲ್ಲಿ ನಾನು ನೀನು!
ಗರ್ವದಿ ಮೆರೆವೆವು ನಾವು, ಆದರೆ
ನಾವು ಮಣ್ಣಿನ ಇನ್ನೊಂದು ರೂಪ
ಮಣ್ಣಿಗೆ ಮರಳಿ ಹೋಗುವೆವು
ನಮ್ಮ ಜೀವ ಪಡೆದಿರುವ ಸಾಲ
ಆತನಿಗೆ ಮರಳಿ ನೀಡವೆವು
ಗೂಡಿನಿಂದ ಹೊರಟ ಹಕ್ಕಿಯು
ಗೂಡಿಗೆ ಮರಳುವುದು ಸಹಜ
ನೋವಿನ ಸುಳಿವಿಲ್ಲ, ನಿರ್ಭಯ
ಒಂದು ನಿರಾಳ ಭಾವ, ಉನ್ಮಾದ
ಯಜಮಾನನ ಗಿಡದ ಹೂವು
ಆತನ ಮುಡಿಯೇರುವುದು ಸಹಜ
ಅಗಲಿಕೆಯ ನೋವಿಲ್ಲ, ಸಂತೃಪ್ತಿ
ಒಂದು ಸಂತಸದ ಭಾವ, ಉನ್ಮಾದ
ಜಗವನು ಅಗಲುವುದಲ್ಲ ಸಾವು
ಪೆದ್ದರಿಚ್ಚ
ದೇವರಿಂದ ಅಗಲಿ ಹೋಗುವುದು
ನಿಜವಾದ ಸಾವು!