ಜಗದ ದೊಡ್ಡ ಪಾತ್ರೆಯಲಿ
ಭರಿಸಿಹನು ಬಾಳ ಪಾನ
ಸಿಹಿಯಾಗಲಿ ಕಹಿಯಾಗಲಿ
ಕುಡಿಯಬೇಕು ಅನುದಿನ
ನಿನ್ನ ಪಾತ್ರೆಯಲಿರುವ ಪಾನ
ನೋಡಬೇಕು ಪ್ರತಿ ದಿನ
ಕುಡಿಯಬೇಕು ಉಗಿಯಲಾರೆ
ಮುಗಿಸಬೇಕು ಒಂದಿನ.
ಹೆದರಬೇಡ ಇಣುಕಿ ನೋಡು
ಪಾನವಿರುವ ಬಟ್ಟಲು
ನಡುಗಬೇಡ ಮನಸ್ಸು ಮಾಡು
ಎತ್ತಿ ಹಿಡಿದು ಕುಡಿಯಲು
ನೆರವು ಸಿಗದು ಹೊರಗಿನಿಂದ
ಅರಿಯೋ ಬೇಗ ಮಾನವ
ನಿನ್ನ ಹೊರತು ಕುಡಿಯರಾರು
ತುಂಬಿರುವ ಪಾನವ
ಒಂದೇ ಒಂದು ಗುಟುಕಿನಲಿ
ಮುಗಿಸಲಾರೆ ಪಾನವ
ಸ್ವಲ್ಪ ಸ್ವಲ್ಪ ಹೀರಬೇಕು
ಸವಿಯಬಲ್ಲೆ ಸಾರವ
– ಪೆದ್ದರಿಚ್ಚ