
ಮಾಡುವ ಕೆಲಸದಲ್ಲಿ ಪ್ರೀತಿಯಿದ್ದರೆ
ಸೋಲೂ ಗೆಲುವಾಗುತ್ತದೆ
ನಷ್ಟವೂ ಇಷ್ಟವಾಗುತ್ತದೆ.
ಮಗುವಿನಂತ ಮನಸ್ಸು ನಮ್ಮಲ್ಲಿದ್ದರೆ
ವಿಕಾರವು ಆಕಾರವಾಗುತ್ತದೆ
ಕುರೂಪವೂ ಸೌಂದರ್ಯವಾಗುತ್ತದೆ.
ಮಗುವಿನಂತಹ ಮನಸ್ಸಿರಲಿ
ಆ ಮನಸ್ಸಿನಲ್ಲಿ ಪ್ರೀತಿಯಿರಲಿ
ಆ ಪ್ರೀತಿಯಲಿ ತ್ಯಾಗವಿರಲಿ
ನೀನೂ ಮಗುವಿನಂತೆ ಸದಾ
ನಗುನಗುತಾ ಇರುವೆ ಪೆದ್ದರಿಚ್ಚ!








