
ಮಾಡುವುದೂ ಇಲ್ಲ
ಮಾಡ ಬಿಡುವುದೂ ಇಲ್ಲ
ಮಾಡುವರ ಕಾಲೆಳೆಯಲು
ಮರೆಯುವುದೂ ಇಲ್ಲ
ಒಳಿತಿಗೆ ಸಾಥ್ ಇಲ್ಲ
ಕೆಡುಕಿಗೆ ಬ್ರೇಕ್ ಇಲ್ಲ
ಕಾಲ್ಕೊಟ್ಟು ಬೀಳಿಸುವ
ಜನಕ್ಕೇನು ಬರವಿಲ್ಲ
ಒಳಿತಿಂದು ಇಷ್ಟವಿಲ್ಲ
ಕೆಡುಕೇನು ಕಷ್ಟವಲ್ಲ
ಕೆಡುಕೇ ಇಷ್ಟವಾಗಲು
ಒಳಿತಿಗಿಲ್ಲಿ ಸ್ಥಳವಿಲ್ಲ
ಬೆಳೆಗಿಲ್ಲಿ ಬೆಲೆಯಿಲ್ಲ
ಕಳೆಗಿಲ್ಲಿ ಸಾಲೆಲ್ಲ
ಕಳೆಯನ್ನೆ ಬೆಳೆಯೆನಲು
ಬೆಳೆಗಿಲ್ಲಿ ಬದುಕಿಲ್ಲ
ಒಳಿತಲ್ಲಿ ಕೆಡುಕಿಲ್ಲ
ಕೆಡುಕಲ್ಲಿ ಒಳಿತಿಲ್ಲ
ಕೆಡುಕನ್ನೇ ಬೆನ್ನಿಡಿವ
ಮನದಲ್ಲಿ ಗೆಲುವಿಲ್ಲ
ಕೆಡುಕಿನ ಆ ಕತ್ತಲಲಿ
ನೆಮ್ಮದಿಯ ಬಾಳಿಲ್ಲ
ಒಳಿತಿನ ಆ ಕಿಡಿಯಿರದೆ
ನಿನ ದಾರಿಗೆ ಈಡಿಲ್ಲ
-ಪೆದ್ದರಿಚ್ಚ








