
ನೀನು ಯಾರು ಎಂದು ಆತ ಕೇಳಲು
ತಬ್ಬಿಬ್ಬಾದೆ…
ಉತ್ತರ ಹೇಳಲಾಗದೆ
ಕಂಗಲಾದೆ…
ನಾನು ಪೆದ್ದರಿಚ್ಚ ಎನಲೇ?
ಅದು ನನ್ನ ಹೆಸರು ಮಾತ್ರ…
ನಾನು ತಂದೆಯ ಮಗ ಎನಲೇ?
ಅದು ಒಂದು ಸಂಬಂಧ ಮಾತ್ರ
ನಾನು ಗುರು ಎನಲೇ?
ಅದು ಎನ್ನ ವೃತ್ತಿ ಮಾತ್ರ…
ನಾನು ಮಾನವ ಎನಲೇ?
ಅದು ಒಂದು ವರ್ಗ ಮಾತ್ರ…
ನಾನು ಪುರುಷ ಎನಲೇ?
ಅದು ಒಂದು ಜಾತಿ ಮಾತ್ರ…
ನಾನು ಸಿರಿವಂತ/ಬಡವ ಎನಲೇ?
ಅದು ಒಂದು ಸ್ಥಿತಿ ಮಾತ್ರ…
ನಾನು ಜ್ಞಾನಿ, ಧ್ಯಾನಿ ಎನಲೇ?
ಅದು ಎನ್ನ ಗುಣ ಮಾತ್ರ…
ನಾನು ದೇಹ ಎನಲೇ?
ಅದೂ ಮೂರು ದಿನಕೆ ಮಾತ್ರ…
ಏನೂ ಹೊಳೆಯದೆ ಮೌನಿಯಾದೆ…
ಆ ಮೌನದಿ ಆಲಿಸಿದೆ
ನೀನು ಜೀವಾತ್ಮ…
ನನ್ನ ರೂಪ, ಸ್ವರೂಪ
ನನ್ನ ವಿಸ್ತರಣೆ
ಅರಿತಾಗ ಇದನು
ಪಡೆವೆ ಮೇಲಿನ ಎಲ್ಲಕೂ ವಿವರಣೆ
ಅಂತರಾತ್ಮದ ಈ ಪ್ರಕಟಣೆ
ನನ್ನ ಬಾಳಿಗಾಯಿತು ಪ್ರೇರಣೆ…








