
ಸತ್ಯಕ್ಕಾಗಿ ಹೋರಾಡುವೆ
ಸತ್ಯ ಮಾತನಾಡೆನು
ಶಾಂತಿಗಾಗಿ ಜಗಳಮಾಡುವೆ
ಶಾಂತವಾಗಿರಲಾರೆನು
ಬಡವರಿಗಾಗಿ ಮಾತನಾಡುವೆ
ದಾನ ಮಾಡೆನು
ನ್ಯಾಯಕ್ಕಾಗಿ ಕ್ರಾಂತಿ ಮಾಡುವೆ
ಅನ್ಯಾಯವ ಬಿಡೆನು
ಅಜ್ಞಾನವನ್ನು ಟೀಕಿಸುವೆ
ಅಕ್ಷರವನು ಕಲಿಸೆನು
ಲಂಚವನು ಖಂಡಿಸುವೆ
ಹಣದಾಸೆ ಮರೆಯೆನು
ಒಳಿತಿಗಾಗಿ ಹೋರಾಟ ಮಾಡುವೆ
ಕೆಡುಕನು ಬಿಡೆನು
ದೇವನ ವರಕ್ಕಾಗಿ ಆಶಿಸುವೆ
ಪಾಪ ಬಿಡೆನು
-ಪೆದ್ದರಿಚ್ಚ








