
ಜೀವನ ಒಂದು ಬೇಸಾಯ
ರೈತನೇ ಪಾಠ ಹೇಳುವ ಗುರುವರ್ಯ
ಬೆಳೆಗಳನು ಬೆಳೆಯುವುದೇ ಆತನ ಗುರಿ
ಆತ ಕಳೆಗಳಿಗೆ ಅಂಜದೆ ಕಿತ್ತೊಗೆಯುವ ಉದಾರಿ…
ಬೆಳೆಗಳನು ಕಣಜದಲಿ ತುಂಬುವನು
ಕಳೆಗಳನು ಬೆಂಕಿಯಲಿ ಸುಡುವನು
ಮಳೆಯಿರಲಿ ಚಳಿಯಿರಲಿ
ಗುರಿ ಮರೆಯದೆ ದುಡಿವನು…
ಬೆಳೆಯೆಂಬ ಒಳಿತನು ಬೆಳೆಯೋಣ
ಕಳೆಯೆಂಬ ಕೆಡುಕನು ಕೀಳೋಣ
ಮಳೆಯಿರಲಿ ಚಳಿಯಿರಲಿ
ಪ್ರೀತಿಯ ಬೆಳೆಯನೇ ಬೆಳೆಯೋಣ
ಬೆಳೆಯ ಸುಗ್ಗಿಯಲಿ
ನಲಿದು ಹಿಗ್ಗೋಣ
ಇಳೆಯ ಒಡೆಯನ
ನಮಿಸಿ ಹಾಡೋಣ
-ಪೆದ್ದರಿಚ್ಚ








