ಕುರುಡು ಬಾಳು

ಕಣ್ಣ ರೆಪ್ಪೆಗಳು ಮುಚ್ಚಿವೆ
ಮನುಜರು ಮರಗಳಂತೆ ಕಾಣುತಿಹರು…
ಬಿಳಿ ಪೊರೆಯು ಬೆಳೆದಿದೆ
ಮಾನವರು ದಾನವರಂತೆ ತೋರುತಿಹರು

ಯಾಕೋ ಕುರುಡನಾಗಿಹೆ
ವ್ಯಕ್ತಿಗಳು ವಸ್ತುಗಳಾಗಿ ಮಿನುಗುತಿಹರು
ನಿದ್ದೆಯ ಅಮಲು ಏರಿದೆ
ಬೆಳಕಲು ಕತ್ತಲರಸರೇ ಆಳುತಿಹರು.

ಕಣ್ಣಿದ್ದೂ ಕುರುಡನು ನಾನಿಂದು
ದಯೆಯ ಬಾವಿ ಬತ್ತಿದೆ
ಕಣ್ಣೀರಿನ ಬರಗಾಲ ಎಂದು
ಕಪ್ಪು ಕನ್ನಡಕವ ತೊಟ್ಟಿಹೆ

ನಿನ್ನ ನೋಡುವವರೆಗೂ
ಕಣ್ಣಿದ್ದೂ ನಾನು ಕುರುಡನು
ಅಂಧ ಪೊರೆಯ ಕಳಚಲು
ಕರವೆತ್ತಿ ಮುಟ್ಟು ಎನ್ನನು

ದಿವ್ಯ ದೃಷ್ಟಿಯ ಕರುಣಿಸು
ತೆರೆದ ಕಣ್ಣಲಿ ನೋಡಲು
ಪ್ರೇಮದ ಮಳೆಯ ಸುರಿಸು
ದಯೆಯ ಕಣ್ಣೀರ ಹರಿಸಲು
-ಪೆದ್ದರಿಚ್ಚ

ಸುಳ್ಳರು!

ಸುಳ್ಳನೇ ನಂಬುವ ಸುಳ್ಳಿನ ಜನರು
ಸತ್ಯವ ಮರೆಸಲು ಸಾಗಿಹರು
ಸುಳ್ಳಿಗೆ ಅಂದದ ಬಣ್ಣವ ಬಳಿದು
ಸತ್ಯವ ತೊರೆಸಲು ಬಾಗಿಹರು.

ಸುಳ್ಳಿನ ಆಟವ ಅರಿಯದ ಜನರು
ಸುಳ್ಳನೆ ಅಪ್ಪಿ ಅಲೆದಿಹರು
ಸತ್ಯದ ಪಾಟವ ತಿಳಿಯದ ಮುಗ್ದರು
ಹಾದಿಯ ತಪ್ಪಿ ನಲುಗಿಹರು.

ಸುಳ್ಳಿನ ಸಿಹಿಯನು ಬಾಯಿಗೆ ನೀಡುತಾ
ಸುಳ್ಳಿನ ಸಂತೆಯ ಹರಡಿಹರು
ಸತ್ಯದ ಕಹಿಯನು ವಿವರಿಸಿ ಹೇಳುತ
ಸತ್ಯವ ದೂರಕೆ ಎಸೆದಿಹರು.

ಸುಳ್ಳಿನ ಸಿಹಿಯ ಭಕ್ಷಿಸಿ ದೀನರು
ಕಹಿಯ ಬಳುವಳಿ ಪಡೆದಿಹರು
ಸತ್ಯದ ಕಹಿಯನು ಸ್ವಾಧಿಸಿ ಭಕ್ತರು
ನವರಸ ಚಳುವಳಿ ನಡೆಸಿಹರು.

ಸುಳ್ಳಿನ ವೇಗದ ಓಟದ ಮುಂದೆಯೇ
ಸುಳ್ಳಿನ ಬಾವುಟ ಸಾಗುವುದು
ಸೆಳೆಯುವ ಅದರ ಬಣ್ಣಕೆ ಸೋತರೆ
ಜೀವನ ನರಕವೇ ಆಗುವುದು

ಸತ್ಯದ ನಡೆಯಲಿ ದೀನತೆ ತುಂಬಿದೆ
ಅರಿತರೆ ಸುಖವು ದೊರೆಯುವುದು
ಸತ್ಯದ ಸರಳತೆ ಮೆಲ್ಲನೆ ಅರಿತರೆ
ಭುವಿಯಲೇ ಸ್ವರ್ಗವು ಲಭಿಸುವುದು.
-ಪೆದ್ದರಿಚ್ಚ

ಚಿಹ್ನೆಗಳು ನೂರು!

ಇರುವೆಯಾ ದೇವಾ ನನ್ನೊಂದಿಗೆ
ತಿಳಿಯದು ನನ್ನ ಮಂಕು ಬುದ್ದಿಗೆ
ತೋರಿದರೆ ಒಂದು ಚಿಹ್ನೆ ಸ್ವರ್ಗದಿಂದ ಈ ಕಣ್ಣಿಗೆ
ನೆರವಾಗುತ್ತಿತ್ತು ನನ್ನ ಬರುತ್ತಿರುವ ನಾಳೆಗೆ…

ಇರುವೆನು ನಾನು ಮನುಜ ನಿನ್ನ ಜೊತೆಗೆ
ಪೊರೆ ಕಟ್ಟಿದೆ ಏಕೆ ನೋಡುವ ನಿನ್ನ ಕಣ್ಣಿಗೆ
ತೆರೆದು ಒಮ್ಮೆ ನೋಡು ನಿನ್ನ ಕಣ್ಣನು ಮೆಲ್ಲಗೆ
ಕಾಣುವೆ ನನ್ನ ನೀನು ಪ್ರತಿಯೊಂದು ಘಳಿಗೆ…

ನಗುವ ಮಗುವನ್ನೊಮ್ಮೆ
ಅಳದ ತಾಯಿಯನ್ನೊಮ್ಮೆ
ಪಿತನ ತ್ಯಾಗವನ್ನೊಮ್ಮೆ
ಕಣ್ರೆಪ್ಪೆ ತೆರೆದು ನೋಡು!

ರೈತನ ಬೆವರನ್ನೊಮ್ಮೆ
ಸೃಷ್ಟಿಯ ಬೆಲೆಯನ್ನೊಮ್ಮೆ
ಪ್ರೇಮದ ಬಲವನ್ನೊಮ್ಮೆ
ಕಣ್ಣ ಬಿಟ್ಟು ನೋಡು!

ಚಿಹ್ನೆಗಳು ನೂರು
ಅರಿಯೋ ತೆರೆದಿರಲು ಮನಸು
ಸಂದೇಹಗಳ ಸೂರು
ತಿಳಿಯೋ ಹರಿದಿರಲು ಕನಸು
– ಪೆದ್ದರಿಚ್ಚ

Beatitude

Blessed are the poor who cannot afford to buy a smart phone,
For they will enjoy celestial peace.

Blessed are those who mourn because of their inability to read and write the messages in social networking apps,
For they will have real friends in their lives.

Blessed are those who use only one number and one genuine account,
For they will be trusted.

Blessed are those who forward genuine and true messages,
For they will be satisfied.

Blessed are those who do not upload more than five things on status and thus show compassion,
They too will receive compassion.

Blessed are those who send pure and clean messages,
For their heart will be clean.

Blessed are those who do not send provocative messages to disturb peace and harmony,
For they will be honored.

Blessed are those who do not persecute the others by gossiping in social networks,
For they will experience heaven here on earth.

Blessed are those who are irritated, hurt and troubled due to thousands of irrelevant forward messages,
For they will learn the virtue of patience.

– Peddariccha

ಭಾಗ್ಯವಂತರು!

ಮೊಬೈಲ್ ಬಳಸಲಾಗದ ಬಡವರು ಭಾಗ್ಯವಂತರು
ಶಾಂತಿಯ ಜೀವನ ಅವರದಾಗುವುದು

ಯಾಪ್ ಬಳಸಲು ಭಾಷೆ ತಿಳಿಯದೆ ದುಃಖಿಸುವವರು ಭಾಗ್ಯವಂತರು
ಅವರು ಸಂತೈಸುವ ನಿಜ ಗೆಳೆಯರನ್ನು ಪಡೆಯುವರು.

ಒಂದೇ ನಂಬರ್ ಹಾಗೂ ಅಕೌಂಟ್ ಹೊಂದಿರುವವರು ಭಾಗ್ಯವಂತರು
ಅವರು ವಿಶ್ವಾಸವನ್ನು ಗಳಿಸುವರು.

ಸತ್ಯವನ್ನು ಮಾತ್ರ ಫಾರ್ವರ್ಡ್ ಮಾಡುವವರು ಭಾಗ್ಯವಂತರು
ಅವರು ಸಂತೃಪ್ತಿಯನ್ನು ಪಡೆವರು.

ಸ್ಟೇಟಸ್ ನಲ್ಲಿ ಐದಕ್ಕಿಂತ ಹೆಚ್ಚು ಫೋಟೋ ಹಾಕದೆ ಕರುಣೆ ತೋರುವವರು ಭಾಗ್ಯವಂತರು;
ಇತರರೂ ಅವರಿಗೆ ಕರುಣೆ ತೋರುವರು.

ಶುದ್ಧ ಮೆಸೇಜ್ ಗಳನ್ನು ಮಾತ್ರ ಕಳಿಸುವವರು ಭಾಗ್ಯವಂತರು
ಅವರು ಶುದ್ಧ ಮನಸ್ಸನ್ನು ಹೊಂದುವರು.

ಜಗಳ ಕಟ್ಟುವ ಮೆಸೇಜ್ ಕಳಿಸಿ ಸಮಾಧಾನ ಹಾಳುಮಾಡದವರು ಭಾಗ್ಯವಂತರು
ಶ್ರೇಷ್ಠ ವ್ಯಕ್ತಿಗಳು ಅವರಾಗುವರು.

ಗಾಳಿಸುದ್ದಿಗಳಿಂದ ಹಿಂಸೆ ಮಾಡದವರು ಭಾಗ್ಯವಂತರು;
ಅವರು ಸ್ವರ್ಗವನ್ನು ಕಾಣುವರು.

ನೂರಾರು ಫಾರ್ವರ್ಡ್ ಮೆಸೇಜ್ ಗಳಿಂದ ಹಿಂಸೆಗೆ, ತೊಂದರೆಗೆ, ಕಿರಿಕಿರಿಗೆ ಒಳಗಾಗುವವರು ಭಾಗ್ಯವಂತರು
ಅವರು ಸೈರಣೆಯನ್ನು ಹೊಂದುವರು.
-ಪೆದ್ದರಿಚ್ಚ

ನೀಡು

ನೀಡುವ ದೇವನು ನೀಡಿಹನು ಬಾಳನು
ನೀಡುವುದನು ಕಲಿಯಬೇಕು ದೇವನಂತೆ ಮನುಜನು
ನೀಡುವಾತ ನೋಡನು ಕೊರತೆಗಳ ಸಾಲನು
ನೀಡಿದಷ್ಟು ಪಡೆವನು ದೇವರಿಂದ ತನುಜನು.

ನೀಡಿ ಕೆಟ್ಟವರಿಲ್ಲ ಮೂರು ದಿನದ ಈ ಬಾಳಲಿ
ನೀಡಿದಷ್ಟು ಬೆಳೆವರು ಆ ದೇವನ ಭಕ್ತಿಯಲಿ
ನೀಡಿ ಮೊಟಕಾಗವು ಎಮ್ಮ ಬೆರಳುಗಳು ಕೈಯಲಿ
ಸ್ವರ್ಗದಷ್ಟು ಪಡೆವರು ಈ
ಜಗದ ಬಾಳಿನಲಿ.

ನೀಡಿದರೆ ಸಾಕು ನಾವು ನಮ್ಮಲಿ ಇರುವುದನು
ನೀಡುವನು ದೇವನು ಆಗ ನಮ್ಮಲಿ ಇಲ್ಲದಿರುವುದನು
ನೀಡಿದರೆ ಪ್ರತಿಯೊಬ್ಬನೂ ತನ್ನಲಿ ಇರುವುದನು
ದೇವನು ಈ ಜಗದಲಿ ಪವಾಡಗಳ ಮಾಡುವನು.
-ಪೆದ್ದರಿಚ್ಚ

ಎಫ್ಫಾತ

ಕಿವಿಗಳು ತೆರೆಯಲಿ
ಹೃದಯವು ಬೆಳಗಲಿ
ಬಾವಿಯ ಕಪ್ಪೆಯು
ಜಗವನು ಕಾಣಲಿ.

ಚಿಂತನೆ ಅರಳಲಿ
ಭಾವನೆ ಬೆರೆಯಲಿ
ಮುಚ್ಚಿದ ಬಾಗಿಲು
ನಗುವನು ಬೀರಲಿ.

ಪ್ರೀತಿಯು ಹರಿಯಲಿ
ಶಾಂತಿಯು ಚಿಮ್ಮಲಿ
ಇರುಳಿನ ದೀಪವು
ಹಗಲನು ನೋಡಲಿ.

ಸಂತಸ ಹರಡಲಿ
ನಲಿವು ಮೊಳಗಲಿ
ಬಾಡಿದ ಮೊಗವು
ಚಿಗುರನು ಕಾರಲಿ.

ನೋಟವು ಬೆಳೆಯಲಿ
ಕಾಯವು ಬಲಿಯಲಿ
ಕಲ್ಲಿನ ಹೃದಯವು
ಮಮತೆಯ ತೋರಲಿ.
-ಪೆದ್ದರಿಚ್ಚ

ಅಮೂಲ್ಯ ರತ್ನ

ಪದಗಳಿಲ್ಲದ ಶಬ್ದ ಮಾಡದ
ಮಧುರ ಭಾಷೆ
ಭಾವ ತುಂಬುವ ಜೀವ ನೀಡುವ
ಸುಂದರ ಭಾಷೆ
ಕಿವುಡನೂ ಕೇಳುವ ಮೂಗನೂ ಉಲಿಯುವ
ಅದ್ಭುತ ಭಾಷೆ
ಪ್ರೀತಿ….

ದೇವನನೂ ಧರೆಗೆ ಸೆಳೆಯಬಲ್ಲದು
ಜೀವ ಜಂತುಗಳೊಡನೆ ಬೆರೆಯಬಲ್ಲುದು
ಏಕಾಂತದ ಬರಗಾಲದಲಿ
ಚಿಮ್ಮುವ ಕಾರಂಜಿ ಪ್ರೀತಿ…

ಇರುವುದಕೆ ಬೆಲೆ ಕಟ್ಟಲಾಗದು
ಇಲ್ಲದುದ ಕೊಂಡುಕೊಳ್ಳಲಾಗದು
ಸುರಿವ ಮಳೆಯಂತೆ ಉಚಿತವಾಗಿ ದೊರೆವ
ಅಮೂಲ್ಯ ರತ್ನ ಪ್ರೀತಿ…

ಪ್ರೀತಿಯ ಮಿಲನವೇ ಜೀವದ ಆರಂಭ
ಪ್ರೀತಿಯ ಸಿಂಚನವೇ ಬಾಳಿನ ಆಧಾರ ಸ್ತಂಭ
ಪ್ರೀತಿ ಇದ್ದರೆ ಬಾಳು
ಅದರ ಕೊರತೆಯೇ ಸಾವು…
-ಪೆದ್ದರಿಚ್ಚ

ಹೃದಯ

ಇರುವುದು ಎಮಗೆ ಸುಂದರ ಹೃದಯ
ಅದರಲೇ ಒಳಿತು ಕೆಡುಕಿನ ಉದಯ
ಒಳಿತನು ಬಯಸಲು ಒಳಿತಿನ ಮಿಲನ
ಕೇಡನು ಬಯಸಲು ಕೇಡಿನ ಜನನ.

ಪ್ರೀತಿಯ ಸೆಲೆಯು ಎಮ್ಮಯ ಹೃದಯವು
ಪ್ರೀತಿಯ ರಕುತವ ಚಿಮ್ಮುವುದು
ಕೆಡುಕಿನ ಸೆಳೆತಕೆ ಸ್ಪಂದಿಸಿ ಬಾಳಲು
ನಾಶಕೆ ಎಮ್ಮನು ತಳ್ಳುವುದು.

ಹೃದಯದ ಗೂಡಲಿ ಪ್ರೀತಿಯ ದೀಪವ
ಹಚ್ಚುತಾ ಬಾಳನು ಬೆಳಗೋಣ.
ಕೆಡುಕಿನ ಜೇಡರ ಬಲೆಯನು ಎಸೆಯುತಾ
ಒಳಿತಿನ ಕಿರಣವ ಬೀರೋಣ.
-ಪೆದ್ದರಿಚ್ಚ

https://peddariccha.home.blog

ಹಸಿರು

ಉಂಟುಮಾಡಿದನು ಎಮ್ಮನು ದೇವನು
ನೀಡಿ ಆತನ ಸ್ವರೂಪವನು
ಹೀಗಿರಲು ನಮ್ಮಲ್ಲಿ ಮೇಲಾರು ಕೀಳಾರು
ಸ್ವರೂಪದಲಿ ಇಲ್ಲದಿರುವಾಗ ತಕರಾರು…

ನೋಡುವುದಿಲ್ಲವೇಕೆ ನೀ ಮನುಜನೇ
ದೇವನ ಆ ರೂಪವನು
ಹುಡುಕುವೆ ಏಕೆ ಓ ಪೆದ್ದನೇ
ಇಲ್ಲದ ಜಾತಿ ಬೇಧವನು

ಮನುಜನೊಳಗಿನ ದೇವನು
ಮೊಡದೊಳಡಗಿಹ ನೀರ ಹನಿಯು
ಇಳಿದಾಗ ಮೆಲ್ಲಗೆ ಹರಿವುದು
ಹಸಿರ ತುಂಬುವ ಜೀವ ಜಲವು
ಒಳಗಡಗಿರುವ ನಿನ್ನ ದೇವನನು
ಅರಿತಾಗ ಹಸಿರು ನಿನ್ನ ಜೀವನವು…
-ಪೆದ್ದರಿಚ್ಚ