
ಬಾಳು ಹೂವ ಹಾಸಿಗೆಯಲ್ಲ
ಚೂಪು ಮುಳ್ಳುಗಳ ಸರಮಾಲೆ
ಚುಚ್ಚಿದರೂ ನೋವಾಗುವುದಿಲ್ಲ
ನಂಬಿಕೆಯಿದ್ದರೆ ನಿನಗದು ಹೂಮಾಲೆ.
ಬಾಳು ನೇರ ರಸ್ತೆಯಲ್ಲ
ತಿರುವು ಮುರುವುಗಳ ಜೋಕಾಲಿ
ಎಡವಿದರೂ ಕೊನೆಯಾಗುವುದಿಲ್ಲ
ಮನಸ್ಸಿದ್ದರೆ ನೀನು ಜಯಶಾಲಿ.
ಬಾಳು ಸಮತಟ್ಟಾದ ಭೂಮಿಯಲ್ಲ
ದಟ್ಟ ಬೆಟ್ಟಗುಡ್ಡಗಳ ಸಾಲು
ಫಲ ಪುಷ್ಪಕ್ಕೇನು ಬರವಿಲ್ಲ
ನೀರೊಳಗಿದ್ದರೆ ಅದರ ಕಾಲು
-ಪೆದ್ದರಿಚ್ಚ







