
ಹೆಸರಲ್ಲೇನಿದೆ ಎಂದರು ಕವಿಗಳು
ಆದರೆ ಹುಡುಕಿ ಕೊಟ್ಟರು ಜ್ಞಾನಿಗಳು
ಯಾರದೋ ಹೆಸರನು ಎರವಲು ಪಡೆವರು
ಅರಿಯದೆ ನನ್ನದೇ ಎನ್ನುವರು.
ಬಾಳಿಗೆ ಅರ್ಥವ ನೀಡಲು ಹೆಸರೋ?
ಹೆಸರಿಗೆ ಅರ್ಥವ ನೀಡಲು ಬಾಳೋ?
ಹೆಸರಲಿ ಏನಿದೆ ಗಮ್ಮತ್ತು?
ತಿಳಿವುದು ಅರಿತರೆ ಕಿಮ್ಮತ್ತು.
ಹೆಸರನು ಕರೆದರೆ ಮನದಲಿ ಇಂಚರ
ಕೂಗಲು ದೂರದಿ ಕಿವಿಗಳು ಎಚ್ಚರ.
ದೇವರು ನೀಡಿಹ ಹೆಸರನು ತಿಳಿದಿರು
ಪದಗಳ ಹೆಸರು ಅಳಿವುದು ಅರಿತಿರು
-ಪೆದ್ದರಿಚ್ಚ








