
ಇರುಳು ಸರಿದಿದೆ
ಬೆಳಕು ಹರಿದಿದೆ
ಹೊಸ ಭಾವನೆ ಮನದಿ ಚಿಗುರಿದೆ
ಭಯವು ತೊಲಗಿದೆ
ಧೈರ್ಯ ಅರಳಿದೆ
ಹೊಸ ಚಿಲುಮೆ ಮನದಿ ಬೆಳೆದಿದೆ
ಸೋಲ ಮರೆಸಿದೆ
ಗೆಲುವ ಕಲಿಸಿದೆ
ಬಾಳ ಹಾದಿಯ ಮನದಿ ಕೊರೆದಿದೆ
ದುಃಖ ಒರೆಸಿದೆ
ಪ್ರೀತಿ ಸುರಿದಿದೆ
ಮನದ ಒಡಲಲಿ ಬಾಳ ಬರೆದಿದೆ
ಸಾವು ಸೋತಿದೆ
ಬಾಳು ಗೆದ್ದಿದೆ
ಬಾಳೋ ಆಸೆಯೂ ಮರಳಿ ಮೂಡಿದೆ
ಸ್ವಾರ್ಥ ಬಿದ್ದಿದೆ
ತ್ಯಾಗ ಎದ್ದಿದೆ
ಬಾಳೋ ಆಸೆಗೆ ಬಲವು ಸಿಕ್ಕಿದೆ
ಸತ್ಯ ಜಯಿಸಿದೆ
ಮಿಥ್ಯ ಮಾಸಿದೆ
ಜಗದ ಇರುಳಿಗೆ ಬೆಳಕು ಮೂಡಿದೆ
ನ್ಯಾಯ ಬೆಳಗಿದೆ
ಮೋಸ ಕರಗಿದೆ
ಜಗದ ಕರುಳಿಗೆ ಒಲುಮೆ ದೊರೆತಿದೆ
-ಪೆದ್ದರಿಚ್ಚ








