
ಸೃಷ್ಟಿಯ ನೋಡಿ ಚಿಕ್ಕದು ಎನ್ನಬೇಡ
ಅದರ ಸೃಷಿಕರ್ತನ ನೋಡು
ಕಿರಿದು ಎಂದು ಹಲ್ಲು ಕಿರಿಯಬೇಡ
ಅಡಗಿರುವ ಶಕ್ತಿಯ ನೋಡು
ಬೀಜ ನೋಡಲು ಕಿರಿದು
ಮರವಾಗುವ ಮೊದಲು
ಬೆಳೆದು ಮರೆಯಾದುದು
ಕಾಣದು ರಾತ್ರಿ ಹಗಲು
ಕಣ್ಗಳ ತೆರೆದು ನೀ ನೋಡು…
ಕಿರಿದು ಹಿರಿದೆನ್ನದೇ ನೋಡು
ಕಣ್ಣೆರಡು ಸಾಲವು ಕಾಣಲು
ಆತನ ಪವಾಡಗಳ ಸಾಲು
ಪೆದ್ದ ರಿಚ್ಚಾ







