
ಮರಳಿ ಬಾರದು ಮತ್ತೇ ಗೂಡಿಗೆ
ಹಾರಿ ಹೋದರೆ ಜೀವದಕ್ಕಿಯು
ತಿರುಗಿ ಬಾರದು ನದಿಯು ಬಯಲಿಗೆ
ಒಮ್ಮೆ ಹೋದರೆ ಕಡಲ ಸೇರಲು
ಏನೇ ಆದರೂ ಬೇಗ ಸಾಧಿಸು
ಒಡಲ ಉಸಿರು ನಿಲ್ಲೋ ಮೊದಲು
ಉಪ್ಪು ನೀರಲಿ ಜೀವ ಚಿಗುರದು
ಅರಿಯೋ ಕಡಲ ಸೇರೋ ಮೊದಲು
ಒಮ್ಮೆ ಬಾಳಲು ಒಂದೇ ಬಾಳಿದೆ
ಉಸಿರು ನಿಂತರೆ ಮತ್ತೇ ಏನಿದೆ
ಮರಳಿ ಬಾರದ ಸತ್ಯ ಅರಿಯುತಾ
ಒಳಿತು ಮಾಡುತಾ ಬಾಳು ಸುಖವಿದೆ
-ಪೆದ್ದರಿಚ್ಚ








