ನಂಬಿಕೆ ಇಲ್ಲದ ನಿನ್ನಯ ಬಾಳು
ನೀರೇ ಇಲ್ಲದ ಮರುಭೂಮಿ
ನಂಬಿಕೆ ಕಾಣದ ನಿನ್ನಯ ಮನವು
ಏನು ಬೆಳೆಯದ ಒಣಭೂಮಿ
ನಂಬಿಕೆ ಬೆಳೆಯಲಿ ನಿನ್ನಯ ಬಾಳಲಿ
ಬದುಕಿದೆ ನಿನಗೆ ಜಗದಲ್ಲಿ
ನಂಬಿಕೆ ಬೆಳೆಯನು ಮನದ ಹೊಲದಲಿ
ಬೆಳೆದರೆ ಬಾಳಿದೆ ಇಹದಲ್ಲಿ
ನಂಬಿಕೆ ಸಿಂಚನ ಆಗಲಿ ಬಾಳಿಗೆ
ಸಂತಸ ಕಾದಿದೆ ಕ್ಷಣದಲ್ಲಿ
ಅರಿಯದೆ ಮನುಜನು ನಂಬಿಕೆ ಮುರಿದರೆ
ನೋವಿನ ಸುರಿಮಳೆ ಮನದಲ್ಲಿ
– ಪೆದ್ದರಿಚ್ಚ
ಸುಳ್ಳಿನ ಮನೆಯಲಿ






