
ಸಾವಿಲ್ಲದ ಬದುಕಿಲ್ಲ
ಸಾಯಲೇಬೇಕು ನಾವು
ಸಾಯಲು ಭಯವೇಕೆ
ಜೊತೆಗಿಹುದು ಸೃಷ್ಟಿಯು
ಬಾಳೋಣ ಅನುದಿನ
ಭಯವ ದೂರವಿಟ್ಟು
ಬಾಳ ಗುರಿಯನು
ತಲುಪಲು ಪಣತೊಟ್ಟು
ಅಂತ್ಯ ಬೇಕಿದೆ
ಹೊಸತನವ ಕಾಣಲು
ಸಾವು ಬೇಕಿದೆ
ಸೃಷ್ಟಿಕರ್ತನ ಸೇರಲು
ಅಂತ್ಯದ ಭಯಬೇಡ
ಗುರಿಯ ನೋಡುತಿರು
ಸಾವನು ಜಯಿಸುವೆ
ದೇವನ ನೋಡುತಿರು
ಪಯಣಿಗರು ನಾವು
ಭುವಿಯಲ್ಲಿ ಅರಿತಿರು
ಜೊತೆಗೆ ದೇವನಿಹನು
ಭಯವಿಲ್ಲದೆ ಸಾಗುತಿರು
-ಪೆದ್ದರಿಚ್ಚ








