
ಬೀಸುವ ಗಾಳಿಗೂ ಬೇಕಂತೆ ರಜೆ
ದಿಕ್ಕಿನಿಂದ ದಿಕ್ಕಿಗೆ
ನಿರಂತರವಾಗಿ ಅಲೆದು ಬಳಲಿದೆಯಂತೆ
ವಿರಮಿಸಲು ಬೀಸದೆ
ನೀರಿಗೆ ತಿಳಿಯದೆ ಗಾಳಿಯ ಸುದ್ದಿ
ಹರಿವ ನೀರಿಗೂ ಬೇಕಂತೆ ರಜೆ
ಇಳಿಜಾರಿಗೆ ಹರಿದು
ಎದೆ ಚರ್ಮಕೆ ಗಾಯವಂತೆ
ವಿರಮಿಸಲು ಹರಿಯದೆ
ಗಾಳಿ ಇಲ್ಲದ್ದಿದ್ದರೂ ಗಾಳಿಸುದ್ದಿ ಬಲವಾಗಿದೆ
ಭೂಮಿ ತಾಯಿಗೂ ಬೇಕಂತೆ ರಜೆ
ಹೊತ್ತು ಹೊತ್ತು
ಶಕ್ತಿ ಗರ್ಭದ ಪದರದಲ್ಲಿವಂತೆ
ವಿರಮಿಸಲು ಹೆರದೆ
ಉಪಗ್ರಹಗಳ ಮಹಿಮೆ
ಸುದ್ದಿ ಮೇಲೆ ತಲುಪಿದೆ
ಗಗನಕ್ಕೂ ಬೇಕಂತೆ ರಜೆ
ಆಸರೆ ನೀಡಲು ಅಪ್ಪುತಾ
ಕರಗಳು ಬತ್ತಿವೆಯಂತೆ
ವಿರಮಿಸಲು ಕರಮುಚ್ಚಿ
ಸುಮ್ಮನಿರಲಾಗುವುದೇ ಎಲ್ಲರೂ ರಜೆ ಬಯಸಲು
ಬೆಂಕಿಗೂ ಬೇಕಂತೆ ರಜೆ
ಉರಿದು ಉರಿದು
ಮನಸ್ಸು ನಿಸ್ಸಾರವಾಗಿದೆಯಂತೆ
ವಿರಮಿಸಲು ಉರಿಯದೆ
ಮಾಡಬೇಕಾದುದನು ಮಾಡದೇ
ವಿರಮಿಸಲು ಆಗುವುದೇ ಭೂತ ಭಾಂದವರೇ
ಮಾಡಬೇಕಾದುದನು ಮಾಡಿ
ಮಾಡಬಹುದಾದುದನು ಮಾಡದೆ
ವಿರಮಿಸಬಹುದಲ್ಲವೇ ಸ್ನೇಹಿತರೇ!
-ಪೆದ್ದರಿಚ್ಚ