
ಮೋಡವ ನೋಡಿ ಮಳೆಯ ಅರಿಯುವ ನೀನು
ದೇವನ ಮೊಗ ನೋಡಿ ದಯೆಯ ಅರಿಯೆಯಾ?
ಭುವಿಯ ಸ್ಪರ್ಶವ ಮಾಡಿ ತೇವ ಅರಿವ ನೀನು
ದೇವನ ಸ್ಪರ್ಶ ಸವಿದು ಪ್ರೀತಿಯ ತಿಳಿಯೆಯಾ?
ಕರುಣಾ ಮೂರ್ತಿ ದೇವನು
ನಿನ್ನನ್ನೆಂದು ಮರೆಯನು
ಮರೆವಲಿ ನೀ ತೊರೆದರೂ
ತೊರೆಯದೆ ನಿನ್ನಲಿ ಬೆರೆವನು
ಅಪ್ಪಿಕೋ ಒಮ್ಮೆ ಬಿಡದೆ
ನಿನ್ನನಿಂದಾತ ಕರೆವನು
ಹಾಲಲೂ ನೀರನು ಪತ್ತೆ ಹಚ್ಚುವ ನೀನು
ಬತ್ತದ ದೈವ ಸೊಭಗನು ಅರಿಯೆಯಾ?
ಭುವಿಯನೇ ಉತ್ತು ಪಳಗಿಸುವ ನೀನು
ಆತ್ಮದ ಫಲವನು ಬೆಳೆಯಲು ಮರೆವೆಯಾ?
-ಪೆದ್ದರಿಚ್ಚ
ತಪ್ಪಿನಲೊಂದು ತಪ್ಪಾಯಿತು






ನಮ್ಮ ಊಹೆಗೆ ನಿಲುಕದ ರಾಜ್ಯದಲಿ