
ಸೃಷ್ಟಿಯು ಹಾಡಿದೆ ಮಂಗಳ ಗಾನ
ಸಕಲವ ಆಳುವ ಒಡೆಯನಿಗೆ
ತನ್ನಯ ಸೊಭಗಲಿ ನುಡಿದಿದೆ ರಾಗ
ಸಕಲವ ಸೃಜಿಸುವ ದೇವನಿಗೆ
ಬಯಲಲಿ ಇರುವ ಹುಲ್ಲಿನ ಕಡ್ಡಿಯೂ
ಅಪ್ಪಣೆಗಾತನ ಕಾಯುವುದು
ಸಾಲಲಿ ಸಾಗುವ ಸಣ್ಣಯ ಇರುವೆಯೂ
ಕೀರ್ತನೆಯಾತನ ಹಾಡುವುದು
ಪ್ರಾರ್ಥನೆ ಮಾಡುವ ಭಕ್ತನ ಮನದಲಿ
ಪ್ರೀತಿಯ ಹಾಡು ಗುನುಗುವುದು
ನಂಬಿಕೆ ಇರುವ ಭಕ್ತನ ಬಾಳಲಿ
ದೇವನ ಚಿತ್ತವು ಅರಳುವುದು
ಅನುದಿನ ಎನ್ನಯ ನಡೆಯಲಿ ನುಡಿಯಲಿ
ಆತನ ಕೀರ್ತನೆ ಹಾಡುವೆನು
ಆತನು ನೀಡಿಹ ಜೀವದ ಉಸಿರಲಿ
ಆತನ ಮಹಿಮೆಗೆ ಬಾಳುವೆನು
– ಪೆದ್ದರಿಚ್ಚ








