
ಕುರಿಗಾಯಿ ಇಲ್ಲದ ಕುರಿಯಂತೆ
ಎನ್ನಯ ಬಾಳಾಗಿದೆ
ಸಾಗಲು ದಿಕ್ಕಿಲ್ಲದೆ
ತೋರುವ ಗುರುವಿಲ್ಲದೆ
ಒಬ್ಬ ಗುರುವಿಲ್ಲದೆ
ಒಂದು ಗುರಿಯಿಲ್ಲದೆ
ಸಾಗುವುದಾದರೂ ಎಲ್ಲಿಗೆ
ಬಲವಿದ್ದರೆ ಸಾಕೇ
ಸಾಗಲಾಗದು ದೂರ
ಸಮವದು
ಗಾಳಿಯಿಲ್ಲದ ಚಕ್ರಕೆ
ಗುರುವಿಲ್ಲದ ಗುರಿ
ದೂರದಲ್ಲಿ ಕಾಣುವ ಗಿರಿ
ಎಷ್ಟೇ ಸಾಗಿದರೂ ಬಲದಿ
ಕಾಣುವುದು ಅದು
ಅಂದವಾಗಿ ದೂರದಿ
ಗುರುವಿನ ಕರ ಹಿಡಿಯಲು
ಒಮ್ಮೆ ದಿಟಡಿ
ಗುರಿಯ ತುದಿಯು
ಕಾಲ್ಕೆಳಗೆ ಕ್ಷಣದಿ
-ಪೆದ್ದರಿಚ್ಚ








