ಹೃದಯಕೆ ಒರಗಿ
ಹೃದಯದ ನೋವನು
ಅರಿಯಲು ಮನಸ್ಸು ಮಾಡಿದೆನು
ನೋವನು ಅರಿಯಲು ಸಾಧ್ಯವೇ ಇಲ್ಲ
ಎಂಬುದ ಈಗ ತಿಳಿದಿಹೆನು
ಪ್ರೇಮದಿ ಬೆಸೆದ ಹೃದಯಗಳಿದ್ದರೆ
ನೋವಿಗೆ ಸ್ಪಂದನೆ ಸಿಗಬಹುದು
ನೋವಿನ ಆಳವ ತಿಳಿಯದೇ ಇದ್ದರೂ
ಮನಸ್ಸಿಗೆ ಸಾಂತ್ವನ ಸಿಗಬಹುದು
ನೋವನು ಅರಿಯಲು ಆಗದೇ ಹೊದರು
ಪ್ರೀತಿಯ ಮಾತನು ನುಡಿಬೇಕು
ಪ್ರೀತಿಯ ನುಡಿಯುತಾ ನೋವಿನ ಮನಸ್ಸಿಗೆ
ಮರೆಯಲು ಸಮಯವ ಕೊಡಬೇಕು
-ಪೆದ್ದರಿಚ್ಚ







ದೇವನು ಜೊತೆಯಲಿ ನಿನ್ನಯ ಇರಲು
ದೇವರ ಅನುಗ್ರಹ ಮನುಜಗೆ ಇರಲು