
ಸುತ್ತಲೂ ಹಲವು ಗೋಡೆಗಳು
ಅದರೊಳಗೆ ನಾನು ಸೆರೆಯಾಳು
ಕೆಲವೋ ಕಟ್ಟಿದವುಗಳು
ಕೆಲವೋ ಕಾಣದವುಗಳು
ಜನಜಂಗುಳಿಯಲೂ
ಪರರ ಕಾಣಲಾಗದ
ದ್ವೀಪದೊಳಗಿನ ಬಾಳು
ಗೋಡೆಗಳು ಹಲವು
ಬೇಕಾದವುಗಳು ಕೆಲವು
ಚಿತ್ತಾರ ಕಾಣದ ಅವುಗಳ
ನೋಡಲೂ ಬೋರು
ಇಲ್ಲ ಬಾಗಿಲುಗಳು
ಗಾಜಿರುವ ಕಿಟಕಿಗಳು
ಹೊರಗೆ ನೋಡಲಾಗದೆ
ಬರೀ ಕಪ್ಪು ರಂಗಿನ ಇರುಳು.
ಓ ದೇವಾ….
ಗೋಡೆಗಳ ಕಟ್ಟಿದೆ
ಜಗಳಗಳ ನೀಗಲು
ಇಂದೋ…
ನೋಡಲಾಗದೆ ಹೊರಗೆ
ನಾ ಕಣ್ಣಿದ್ದರೂ ಕುರುಡು
ಕೆಡವಲೂ ಬಾರದು
ಹಾರಲು ಆಗದು
ಬರಲಾರದೆ ಹೊರಗೆ
ಕೊನೆವರೆಗೂ ಸೆರೆಯಾಳು…
-ಪೆದ್ದರಿಚ್ಚ








