
ಸುಡು ಬಿಸಿಲಿನಂತಾದರೂ ಸುಡು
ಉರಿವ ಬೆಂಕಿಯಂತಾದರೂ ಸುಡು
ಒಮ್ಮೆ ಸುಟ್ಟು ಬಿಡು
ಚಳಿಹಿಡಿದ ಹೃದಯವನ್ನೊಮ್ಮೆ ಎಬ್ಬಿಸಿಬಿಡು
ನೀ ಅಡಗಿಸಿರುವ ಆ ಪ್ರೀತಿಯನ್ನೊಮ್ಮೆ
ಅರಿಯಲು ಕಲಿಸಿಬಿಡು
ಕೋಲಿನಿಂದ ಹೊಡೆದಾದರೂ ಕಲಿಸು
ಕೈಯಿಂದ ಬಡಿದಾದರೂ ಕಲಿಸು
ಒಮ್ಮೆ ಕಲಿಸಿಬಿಡು
ಮಂಕಾಗಿರುವ ಮನಸ್ಸಿಗೆ ಒಮ್ಮೆ ಬಡಿದುಬಿಡು
ನಿನ್ನ ಪ್ರೀತಿಯ ಆಳವ ಅರಿಯಲು ಕಲಿಸಿಬಿಡು
ಸುರಿವ ಮಳೆಯಿಂದಾದರೂ ತೋಯಿಸು
ಹರಿವ ನೀರನಿಂದಾದರೂ ತೋಯಿಸು
ಒಮ್ಮೆ ನೆನೆಸಿಬಿಡು
ಒಣಗಿ ಬರಡಾಗಿರುವ ನನ ಬಾಳನು ಹಡಮಾಡಿಬಿಡು
ನಿನ್ನ ಪ್ರೀತಿಯ ಅಪ್ಪುಗೆಯನು ಸವಿಯಲು ನೆನೆಸಿಬಿಡು
-ಪೆದ್ದರಿಚ್ಚ








