
ಸಾಗುತಿರು ಹರಿವ ನೀರಂತೆ
ಕಸವಿರಲಿ ರಸವಿರಲಿ
ಬಾಚಿಕೊಂಡು ಸಾಗುತಿರು
ಏರುತಿರು ಆವಿಯ ಹನಿಯಂತೆ
ಕಾಡಿರಲಿ ನಾಡಿರಲಿ
ಗುರಿಮೋಡದತ್ತ ಏರುತಿರು
ಜಿನುಗುತಿರು ಮಳೆಯ ಹನಿಯಂತೆ
ಚಳಿಯಿರಲಿ ಬಿಸಿಲಿರಲಿ
ದೀನತೆಯಿಂದ ಜಿನುಗುತಿರು
ಬೆಳೆಯುತಿರು ಇಳಿವ ಹಿಮದಂತೆ
ಗಿರಿಯಿರಲಿ ಸಿರಿಯಿರಲಿ
ಪರಿಶುದ್ಧನಾಗಿ ಬೆಳೆಯುತಿರು
ಕುದಿಯುತಿರು ಬಿಸಿ ನೀರಿನಂತೆ
ಬೆಳಕಿರಲಿ ಇರುಳಿರಲಿ
ಕೇಡನ್ನು ಜಯಿಸಲು ಕುದಿಯುತಿರು
-ಪೆದ್ದರಿಚ್ಚ








