
ಧ್ವಜ ಎಂದಾಕ್ಷಣ ಅದರಲ್ಲಿ ಏನೋ ಗೂಡಾರ್ಥವಿದೆ.
ಧ್ವಜ ಎಂದಾಕ್ಷಣ ಮೈಯಲ್ಲಿ ಒಂದು ರೋಮಾಂಚನ;
ಎದೆಯ ಗೂಡಲಿ ಒಂದು ಸಿಂಚನ;
ಮನದಾಳದಲ್ಲಿ ಮೂಢಿಬರುವುದು ಸನ್ಮಾನ;
ಉಕ್ಕಿ ಬರುವುದು ಭಾವಗಳು ಪ್ರೇಮ, ಗೌರವ, ಹಾಗು ಅಭಿಮಾನ.
ಧ್ವಜ ಬಟ್ಟೆಯ ತುಂಡಲ್ಲ ಎಂದೇ ಯಾಕೆಂದರೆ ಅದು ಏನನ್ನೋ ಸೂಚಿಸುತ್ತದೆ.
ಅದು ಕೇವಲ ಬಟ್ಟೆಯ ತುಂಡಲ್ಲ ಎಂದೆ ಏಕೆಂದರೆ ಅದು ನಮ್ಮ ದೇಶವನ್ನೇ ಸೂಚಿಸುತ್ತದೆ.
ಅದು ಕೇವಲ ಬಟ್ಟೆಯ ತುಂಡಲ್ಲ ಎಂದೆ ಏಕೆಂದರೆ ಅದು ನಮ್ಮ ವಿಜಯದ ಸಂಕೇತವಾಗಿದೆ.
ಅದು ಕಂಡಾಕ್ಷಣ ಮೈಯಲ್ಲಿ ರೋಮಾಂಚನ ಎಂದೆ ಏಕೆಂದರೆ ಅದು ನಮ್ಮ ದೇಶದ ಸ್ವಾತಂತ್ರ್ಯದ ಸಂಕೇತ;
ಅದ ಕಂಡು ನನ್ನಲ್ಲಿ ರೋಮಾಂಚನ ಎಂದೆ ಏಕೆಂದರೆ ಅದು ನನ್ನ ಹಿರಿಯರ ಶ್ರಮದ ಫಲವನ್ನು ಸೂಚಿಸುತ್ತದೆ.
ಅದ ಕಂಡು ರೋಮಾಂಚನ ಎಂದೆ ಏಕೆಂದರೆ ಅದರ ಹಿಂದೆ ಸಾವಿರಾರು ಹಿರಿಯರ ರಕ್ತಧಾರೆಯಿದೆ.
ಅದ ಕಂಡು ಪ್ರೇಮ, ಗೌರವ, ಅಭಿಮಾನವೆಂದೆ ಏಕೆನೆ ಅದು ಐಕ್ಯತೆಯ ಸಂಕೇತ;
ಅದ ಕಂಡು ಪ್ರೇಮ, ಗೌರವ, ಅಭಿಮಾನವೆಂದೆ ಏಕೆನೆ ಅದು ಸೋದರತ್ವದ ಸಂಕೇತ;
ಅದ ಕಂಡು ಪ್ರೇಮ, ಗೌರವ, ಅಭಿಮಾನವೆಂದೆ ಏಕೆನೆ ಅದು ನಮ್ಮ ಸಮೃದ್ದಿಯ ಸಂಕೇತ;
ಅದ ಕಂಡು ಪ್ರೇಮ, ಗೌರವ, ಅಭಿಮಾನವೆಂದೆ ಏಕೆನೆ ಅದು ನಮ್ಮತನ ಸಂಕೇತ.