
ಮನದಲ್ಲೊಂದು
ಮೊಗದಲ್ಲೊಂದು
ನಾವು ಸುಣ್ಣ ಬಳಿದ ಸಮಾಧಿಗಳು
ನೋಟದಲ್ಲೊಂದು
ದಿಟದಲ್ಲೊಂದು
ಮಾತನಾಡದ ಮುಗ್ದ ಸಮಾಧಿಗಳು
ಮುಚ್ಚಿಡಲಾಗದು
ಬಚ್ಚಿಡಲಾಗದು
ಕೊಳೆತು ಏಳುವ ಸಮಾಧಿಯ ನಾರು
ಅಪ್ಪಲೂ ಆಗದು
ತಪ್ಪಲೂ ಆಗದು
ಬಿಡದೆ ಆಳುವ ಸಮಾಧಿಯ ಸೂರು
ಬಣ್ಣ ಬಳಿದರೇನು
ಸುಣ್ಣ ಎರೆದರೇನು
ಹೆಣ ಮಾತ್ರ ಸಮಾಧಿಯ ಪಾಲು
ಹಣ ಇದ್ದರೇನು
ಬಣ ವಿದ್ದರೇನು
ಹೆಣ ಕುಡಿವುದೇ ಸಮಾಧಿಯಲಿ ಹಾಲು
-ಪೆದ್ದರಿಚ್ಚ








