
ಬಾಳೇ ಹಾಗೆ…
ಬೆಳವಣಿಗೆಯ ಗೋಪುರ
ಬದಲಾವಣೆಯ ಸಾಗರ
ಅಮೂಲ್ಯವಾದುದನು
ಅತೀ ಶೇಷ್ಠವಾದುದನು
ಗಳಿಸುವ ಸುಂದರ ಕಾತರ
ಬಾಳೇ ಹಾಗೆ…
ಯಾವ ತ್ಯಾಗಕೂ ಸಿದ್ದ
ನೀಡಲು ಸವಾಲಿಗೆ ಗದ್ದ
ಬೆಲೆಕಟ್ಟಲು ಆಗದ್ದನ್ನು
ಮನ ಸೆಳೆಯುವುದನ್ನು
ಮುಡಿಗೇರಿಸಲು ಬದ್ದ
ಬಾಳೇ ಹಾಗೆ…
ಪಡೆಯಲು ದೇವನೆಂಬ ನಿಧಿ
ಸಾಲದು ದೂರಿದರೆ ವಿಧಿ
ಮನಸ್ಸು ತಿಳಿಯಾಗಿರಲು
ಚಿತ್ತ ಬಿಳಿಯಾಗಿರಲು
ಸಾಕು ಮೂರು ದಿನದ ಅವಧಿ
– ಪೆದ್ದರಿಚ್ಚ