ಕೈಚಾಚು

ಕೈಯನು ಚಾಚಿಬಿಡು ಒಮ್ಮೆ
ನೋವಾಗದು ನಿನಗೆ
ದೇಹ ಸಡಿಲಾಗುವುದು
ಮನ ಅರಳುವುದು
ಬಿದ್ದವನಿಗೊಂದು ಸ್ವರ್ಗ ಕಾಣುವುದು

ಕೈಯನು ಚಾಚಿಬಿಡು ಒಮ್ಮೆ
ಕಡಿಮೆಯಾಗದು ನಿನಗೆ
ಇದ್ದುದು ಹೆಚ್ಚಾಗುವುದು
ಹೆಚ್ಚಾದುದು ಬೆಲೆ ಪಡೆಯುವುದು
ಪಡೆದವನಿಗೆ ಸ್ವರ್ಗ ಕಾಣುವುದು

ಕೈಯನು ಚಾಚಿಬಿಡು ಒಮ್ಮೆ
ಕರ ಮೊಟಕಾಗದು
ನಗು ಮಿನುಗುವುದು
ಶಾಂತಿ ಹರಿಯುವುದು
ಎದುರಾದವನಿಗೆ ಸ್ವರ್ಗ ಕಾಣುವುದು
-ಪೆದ್ದರಿಚ್ಚ

Leave a comment