ಹೊಸ ವರ್ಷವೇ!

ಬಿತ್ತನೆ ಮಾಡಿ ಕಾಯುತ್ತಿದ್ದೆ
ಮೊಳಕೆ ಒಡೆವುದೋ ಇಲ್ಲವೋ ಎಂದು!
ಅವಧಿ ತಿಳಿದಿತ್ತು ಆದರೂ ಗೊಂದಲ
ಮೊಳಕೆ ಹೇಗಿರುವುದೋ ಏನೋ ಎಂದು!
ತಳಿಯ ಅರಿವಿತ್ತು ಆದರೂ ತಳಮಳ
ಹೇಗೆ ಚಿಗುರುವುದೋ ಏನೋ ಎಂದು!
ಮೊಳಕೆ ಕಂಡ ಕೂಡಲೆ
ನನ್ನಲೂ ಹೊಸತನ…
ನೀರೆರೆವೆ ಅನುದಿನ
ಚಿಗುರೊಡೆದು ಸಸಿಯಾಗುವ ತನಕ…
ರಾಶಿ ಗೊಬ್ಬರವಿದೆ ಬಳಿಯಲಿ
ಪೊರೆಯುವೆ ನಿನ್ನ, ನೀ ಮರವಾಗುವ ತನಕ
ಸಿಹಿ ಹಣ್ಣಿನ ಬಯಕೆ ಇದೆ
ಹುಳಿ ಫಲದ ಭಯದ ಜೊತೆಗೆ
ಓ ಮೊಳಕೆಯೇ ಏನಾಗುವೆ!!!
ನಾನಿರುವೆ ನಿನ್ನ ಜೊತೆಗೆ…
ಬೆಳೆಸುವೆ ಎಂಬ ಭರವಸೆ ಎನಗೆ
ಅನುಭವವಿದೆ ನಿನ್ನ ಪೂರ್ವಜರೊಂದಿಗೆ…
ಓ ಮುದ್ದು ಮೊಳಕೆಯೇ
ನೋಡಿ ನಿನ್ನನು
ಆಸೆಯೊಂದು ಮೊಳಕೆಯೊಡೆದಿದೆ
ಬೆಳೆಯಲು ಸ್ವಲ್ಪ ಸ್ವಲ್ಪ ನಿನ್ನಂತೆಯೇ…
ನಿನ್ನ ಬೆಳೆ ಬೆಲೆ ಪಡೆವಂತೆ
ನಾನು ಬೆಳೆವೆ ಫಲ ನೀಡುವೆ
ಬೆಳೆಯೋಣ ಜೊತೆ ಜೊತೆಗೆ
ಓ ಮುದ್ದು ಮೊಳಕೆಯೇ!!!

– ಪೆದ್ದರಿಚ್ಚ

Advertisements

2 thoughts on “ಹೊಸ ವರ್ಷವೇ!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s