ಪ್ರೀತಿಯ ನಂಟು

ಪ್ರೀತಿಯ ಕಡಲಲಿ ತೇಲಿದರೂ
ಪ್ರೀತಿಯ ರುಚಿ ಸಿಗದಾಯಿತು
ಪ್ರೀತಿಯ ಜೊತೆಯಲಿ ಸಾಗಿದರೂ
ಪ್ರೀತಿಯ ಪರಿಚಯ ಮಾಸಿತು
ಹೃದಯದ ಒಡಲಲಿ ಜಾಗವು ಇರದಿರೆ
ಪ್ರೀತಿಯ ನಂಟು ಕಸಿಯಿತು!

ಪ್ರೀತಿಯ ಸಿಂಚನ ಮೂಡಲು
ಹೃದಯದ ಬಡಿತವು ಚಿಗುರಿತು
ಪ್ರೀತಿಯ ಸೆಳೆತವು ಏರಲು
ಹೃದಯದ ಮಿಡಿತವು ಬಲಿಯಿತು
ಹೃದಯದ ಮನೆಯಲಿ ಚಿಂತೆಯ ಕಸವಿರೆ
ಪ್ರೀತಿಯ ನಂಟು ಕಸಿಯಿತು!

ಪ್ರೀತಿಯ ಗುರಿಯು ತಿಳಿಯಿತು
ಮನಸ್ಸಿಗೆ ದಿಕ್ಕು ತೋಚಿತು
ಪ್ರೀತಿಯು ಸೇವೆಯ ಅಪ್ಪಿತು
ಹೃದಯಕೆ ತೃಪ್ತಿಯು ಲಭಿಸಿತು
ಹೃದಯದ ಗೂಡಲಿ ಆಸೆಯು ತುಂಬಿರೆ
ಪ್ರೀತಿಯು ಉಸಿರನು ಬಿಟ್ಟಿತು!
-ಪೆದ್ದರಿಚ್ಚ

Leave a comment